ಜಯ ದೇವ ದೇವ ಕರುಣಾವತಾರ
Category: ಶ್ರೀರಾಮಕೃಷ್ಣ
Author: ಸ್ವಾಮಿ ವಾಗೀಶ್ವರಾನಂದ
ಜಯ ದೇವ ದೇವ ಕರುಣಾವತಾರ
ಜಗದೇಕಗಮ್ಯ ಸಂಸಾರಸಾರ||
ಮಾಯಾವಿಹೀನ ಸಚ್ಚಿತ್ ಸ್ವರೂಪ
ಲೀಲಾವಿಲಾಸ-ಧೃತಿವಿವಿಧರೂಪ|
ರಾಜಾಧಿರಾಜ ಭುವನೈಕರೂಪ
ಭೂತಾಧಿವಾಸ ಭವಕರ್ಣಧಾರ||
ಚೈತನ್ಯನಾಥ ಸ್ವಾನಂದಕಂದ
ಭವರೋಗವೈದ್ಯ ಜಿತ ನಿಖಿಲಬಂಧ।
ಅತುಲಪ್ರತಾಪ ರಿಪುದಲಕರಾಲ
ಸಾಧಕವಿಶುದ್ಧಮಾನಸವಿಹಾರ||
ವಿಶ್ವಪ್ರಣಮ್ಯ ತ್ರಯತಾಪನಾಶ
ಕಾಮಾದಿದೋಷಹರ ಚಿತ್ಪಕಾಶ!
ಪ್ರಣತೋSಸ್ಮಿನಾಥ ಶರಣಂ ಪ್ರಯಚ್ಚ
ಹೇ ರಾಮಕೃಷ್ಣ ಭವಭಯನಿವಾರ ||