ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು

Category: ಶ್ರೀರಾಮಕೃಷ್ಣ

Author: ಸ್ವಾಮಿ ಪುರುಷೋತ್ತಮಾನಂದ

ರಾಮಕೃಷ್ಣ ರಾಮಕೃಷ್ಣ
ಪ್ರೇಮಸುಧಾಸಿಂಧು ನೀನು|
ಮಧುರ ಮಧುರ ನಿನ್ನ ನಾಮ
ಜಪಿಸಿ ಜಪಿಸಿ ಧನ್ಯ ನಾನು||

ಮಾತೆ ಶಾರದಾಂಬೆ ನಿನ್ನ
ವಕ್ಷಸ್ಥಲದಿ ನೆಲಸಿಹಳಯ್ಯ!
ಶ್ರೀ ವಿವೇಕ ಶ್ರೀ ರಾಖಾಲ
ನಿನ್ನ ಭವ್ಯ ಬಾಹುಗಳಯ್ಯ||

ನಿನ್ನ ದಿವ್ಯ ದೇಹದಲ್ಲಿ
ಶಿಷ್ಯವೃಂದ, ಮಹದಾನಂದ|
ಭಕ್ತ ಜನರು ಬಂದು ಬಂದು
ಬಾಗಿ ಬಾಗಿ ವಂದಿಪರಯ್ಯ||