ಭಾವುಕನ ಭಾವದೊಲು ಅವನವನ ಒಲವು

Category: ಶ್ರೀದೇವಿ

Author: ವಚನವೇದ

ಭಾವುಕನ ಭಾವದೊಲು ಅವನವನ ಒಲವು
ಆ ಒಲವಿಗನುಸಾರ ಅವನು ಪಡೆಯುವ ಫಲವು ||

ಶ್ರದ್ದೆ ಎಲ್ಲಕು ಮೂಲ
ತಾಯ ಶ್ರೀಪಾದಮಧುಸರಸಿಯಲಿ ಮುಳುಗಿರುವ
ನನಗೇಕೆ ಮತ್ತೆ ಜಪತಪ ಹೋಮ ಹವನಾದಿ ಕರ್ಮಗಳ ರಗಳೆ ?