ಹೇ ರಾಮಕೃಷ್ಣ ಸಲಹೊ ಕೃಪಾಲು
Category: ಶ್ರೀರಾಮಕೃಷ್ಣ
Author: ಸ್ವಾಮಿ ಪುರುಷೋತ್ತಮಾನಂದ
ಹೇ ರಾಮಕೃಷ್ಣ ಸಲಹೊ ಕೃಪಾಲು||
ಕನಕ ಕೇಳುವುದಿಲ್ಲ, ಕೀರ್ತಿ ಬೇಡುವುದಿಲ್ಲ!
ಭಕ್ತಿಯೊಂದನೆ ನಿನ್ನ ಬೇಡುತಲಿಹೆನಯ್ಯ||
ಧನವೆನ್ನ ಜೊತೆಗೆಂದೂ ಬಾರದು ದಿಟವು||
ಹೆಸರು ಕೀರ್ತಿಯನೆಲ್ಲ ಮರೆತೇಬಿಡುವರು||
ನಾನು ನಾನು ನಾನು ಇದೇ ನನ್ನ ಮಂತ್ರ!
ಈಗ ಅರಿತೆ ಇದು ಮನದ ಕುತಂತ್ರ||
ಎನ್ನಿಂದ ಪರರಿಗೆ ಸಂದಿತು ಉಪಕಾರ|
ಎಂದು ತಿಳಿದ ಮಂದಮತಿಯನು ಮನ್ನಿಸು||
ಸತ್ಯವಂತನು ನೀನು ನಿರಭಿಮಾನನು ನೀನು|
ಕಪಟವನರಿಯದ ಸರಳ ಶುದ್ದನು ನೀನು||