ಜಗದೀ ಸಂತೆಯೊಳಲೆಯುವ ಮನುಜ
Category: ಶ್ರೀಶಾರದಾದೇವಿ
ಜಗದೀ ಸಂತೆಯೊಳಲೆಯುವ ಮನುಜ
ನಿಲ್ಲೋ ಒಂದು ಕ್ಷಣ |
ತಾಯಿಯ ನೆನೆಯಲು ಬಂದಿದೆ ಶುಭದಿನ
ಹಾಡೋ ತುಂಬಿ ಮನ ||
ಸ್ಥಾವರ ಜಂಗಮ ಎಲ್ಲಕ್ಕೂ ತಾಯಿ
ಬಂದಿಹಳು ಈ ಧರೆಗೆ |
ಆಮೋದರ ನದಿತೀರದಿ ಕಾಣುವ
ಜಯರಾಂಬಾಟಿಯೊಳಗೆ (ಅಮ್ಮ) ||
ಮಕ್ಕಳು ಮರೆತರು ತಾಯಿಯು ಮರೆವಳೆ
ತನ್ನಯ ಶಿಶುಗಳನು |
ಮಣ್ಣಿನೊಳಾಡುವ ನಮ್ಮನು ಎತ್ತಲು
ಚಾಚಿಹ ಕೈ ನೋಡು (ತಾಯಿಯ) ||
ಭವದೀ ಬವಣೆಗಳೆಲ್ಲವ ಮರೆತು
ಜೈ ಮಾ ಎಂದೆನ್ನು |
ಪಾಪದ ರಾಶಿಗೆ ಇಡು ನೀ ತಾಯಿಯ
ಸ್ಮರಣೆಯ ಬೆಂಕಿಯನು ||