ರಾಮ ಪಾಲಯ

Category: ಶ್ರೀರಾಮ

Author: ನರಸಿಂಹದಾಸ

ರಾಮ ಪಾಲಯ | ದಶರಥ | ರಾಮ ಪಾಲಯ ||

ರಾಮರೂಪಜಿತಕಾಮ ನಿರಂತರ |
ತರುಣಾರುಣಮೃದುಚರಣಾಂಬುಜಯುಗ ||

ಅಮಲಕಮಲನಿಜನಾಭಿವಿರಾಜಿತ |
ಹರಸುರಸರಸಿಜಭವಗರುಡಾರ್ಚಿತ ||

ವಸುಧೇಶ್ವರದಶಶಿರಮದಖಂಡನ
ಇಂದುವದನದಶಸ್ಯಂದನನಂದನ ||

ಕರುಣಾಕರತರಣಿಜವರದಾಯಕ |
ವರನರಸಿಂಹದಾಸಾರ್ಚಿತಪಾದುಕ ||