ವಚನದಲ್ಲಿ ನಾಮಾಮೃತ

Category: ಶ್ರೀಶಿವ

Author: ಬಸವಣ್ಣ

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ ||

ಮನದಲಿ ನಿಮ್ಮ ನೆನಹು ತುಂಬಿ
ಕಿವಿಯಲಿ ನಿಮ್ಮ ಕೀರುತಿ ತುಂಬಿ ||

ಕೂಡಲಸಂಗಮದೇವ ದೇವ ನಿಮ್ಮ
ಚರಣಕಮಲದೊಳಗಾನು ತುಂಬಿ ||