ವೆಂಕಟಾಚಲನಿಲಯಂ ಸ್ವಾಮಿ

Category: ಶ್ರೀಕೃಷ್ಣ

Author: ಪುರಂದರದಾಸ

ವೆಂಕಟಾಚಲನಿಲಯಂ ಸ್ವಾಮಿ
ವೈಕುಂಠಪುರವಾಸಮ್
ಪಂಕಜನೇತ್ರಂ ಪರಮಪವಿತ್ರಂ
ಶಂಖಚಕ್ರಧರಚಿನ್ಮಯರೂಪಮ್ ||

ಅಂಬುಜೋದ್ಭವವಿನುತಂ ಸ್ವಾಮಿ
ಅಗಣಿತಗುಣನಾಮಮ್
ತುಂಬುರುನಾರದ ಗಾನವಿಲೋಲಮ್
ಅಂಬುಧಿಶಯನಂ ಆತ್ಮಾಭಿರಾಮಮ್ ||

ಪಾಹಿ ಪಾಂಡವಪಕ್ಷಂ ಸ್ವಾಮಿನ್
ಕೌರವಾನ್ವಯಹರಣಮ್
ಬಹುಪರಾಕ್ರಮಿಫಣಿಮದಭಂಗಮ್
ಅಹಲ್ಯಾಶಾಪಭಯವಿನಾಶಮ್ ||

ಸಕಲವೇದ ವಿಚಾರಂ ವರ-
ಸಾಧುಜನ ಪರಿಪಾಲಮ್
ಮಕರಕುಂಡಲಧರಮದನಗೋಪಾಲಮ್
ಭಕ್ತವತ್ಸಲಂ ಪುರಂದರವಿಟ್ಠಲಮ್ ||