ಶರಣಾಗು ಶರಣಾಗು

Category: ಶ್ರೀರಾಮಕೃಷ್ಣ

Author: ಪ್ರಭುಪ್ರಸಾದ್

ಶರಣಾಗು ಶರಣಾಗು ಶರಣಾಗು ಮನವೇ
ಶ್ರೀಗುರುಚರಣ ಸರೋಜಕೆ ಮಣಿದು ||

ರಾಮಕೃಷ್ಣ ಗುರುಕೃಪೆ ನಿನಗಾದರೆ
ಹರಿವುದು ಭವಭಯ ಚಿಂತಾರುಜಿನ |
ಶ್ರೀಗುರುನಾಮದ ನೌಕೆಯು ದೊರೆತರೆ
ಭವಸಾಗರ ಯಾನವೆ ಮೋದಕರ ||

ಎಲ್ಲ ಧರ್ಮಗಳ ತಿರುಳನು ಸಾರುವ
ನೊಂದ ಜೀವರಿಗೆ ಭರವಸೆಯೀಯುವ |
ರಾಮಕೃಷ್ಣ ಸಂದೇಶ ಗೀತೆಯ
ಸಾಗರದಲೆಗಳು ಹಾಡುತಿವೆ ||

ಭವ್ಯ ಹಿಮಾಲಯ ಪರ್ವತರಾಜಿಯು
ಮುಳುಗಿರೆ ಧ್ಯಾನ ಸಮಾಧಿಯಲಿ |
ರಾಮಕೃಷ್ಣ ಜಯ ರಾಮಕೃಷ್ಣ ಜಯ
ಎಂಬೀ ನಿನದವು ಕೇಳುತಿದೆ ||