ಶಿವದರುಶನ ನಮಗಾಯ್ತು
Category: ಶ್ರೀಶಿವ
Author: ಪುರಂದರದಾಸ
ಶಿವದರುಶನ ನಮಗಾಯ್ತು ಕೇಳೆ
ಶಿವರಾತ್ರಿಯ ಜಾಗರಣೆ||
ಪಾತಾಳಗಂಗೆಯ ಸ್ನಾನವ ಮಾಡಲು
ಪಾತಕವೆಲ್ಲ ಪರಿಹಾರವು|
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವು||
ಬೇಡಿದ ವರಗಳ ಕೊಡುವನು ತಾಯಿ
ಬ್ರಹ್ಮನ ರಾಣಿಯ ನೋಡುವನು|
ಆಡುತ ಪಾಡುತ ಏರುತ ಬಸವನ
ಆನಂದದಿಂದಲಿ ನಲಿದಾಡುವನು||
ಶಿಖರವ ಕಂಡೆನು ಪುರಂದರ ವಿಟ್ಠಲನ
ಹರಿನಾರಾಯಣ ಧ್ಯಾನದಲಿ||