ಶಿವನ ಭಜಿಸಿರೋ
Category: ಶ್ರೀಶಿವ
Author: ಅಚ್ಯುತದಾಸ
ಶಿವನ ಭಜಿಸಿರೋ (ಪರ) ಶಿವನ...
(ಉಮಾ) ಧವನ ಭಜಿಸಿರೋ ||
ಶಿವನ ಭವನ ಉಮಾಧವನ
ಧವಳಾಂಗನ ದಯಾಘನನ |
ಭವದೂರನ ಭಕ್ತಪ್ರಿಯನ
ಕವಿಗೇಯನ ಕಾಮಹರನ || ಶಿವನ...
ವ್ಯೋಮಕೇಶ ಕಾಮೇಶ್ವರ
ಭೂಮಭದ್ರಗಿರಿನಿವಾಸ |
ರಾಮನಾಮ ನೇಮದಿಂದ
ಭಾಮೆಗೊರೆದ ವಾಮದೇವನ ||
ಕಾಲರೂಪ ನೀಲಕಂಠ
ಮೂಲನಾರಾಯಣನ ಭಕುತ |
ವ್ಯಾಲಭೂಷ ಆಶುತೋಷ
ಫಾಲನೇತ್ರನ ಭಕುತಿಯಿಂದ ||