ತುಂಗಾತೀರದಿ ನಿಂತ ಸುಯತಿವರನ್ಯಾರೇ
Category: ಶ್ರೀಗುರು ರಾಘವೇಂದ್ರ
Author: ಜನಾರ್ದನ ವಿಠಲದಾಸ
ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ
ಸಂಗೀತಪ್ರಿಯ ಮಂಗಳಸುಗುಣಿ ತರಂಗ ಮುನಿಕುಲೋತ್ತುಂಗ ಪೇಳಮ್ಮ
ಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ
ಜಲಜಮಣಿಯು ಕೊರಳೊಳು ತುಳಸಿಮಾಲೆಗಳು ಪೇಳಮ್ಮಯ್ಯ
ಸುಲಲಿತಕಮಂಡಲ ದಂಡವನ್ನೆ ಧರಿಸಿಹನು ಪೇಳಮ್ಮಯ್ಯ
ಖುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ || ೧ ||
ಸುಂದರ ಚರಣರವಿಂದ ಸುಭಕುತಿಯಲಿಂದ ಪೇಳಮ್ಮಯ್ಯ
ವಂದಿಸಿ ಸ್ತುತಿಸುವ ಭೂಸುರರಿಂದ ಪೇಳಮ್ಮಯ್ಯ
ಚಂದದಿಲಂಕೃತಿಯಿಂದ ಶೋಭಿಸುವ ಆನಂದ ಪೇಳಮ್ಮಯ್ಯ
ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮ0ದಿಗಳರಸಘದಿಂದ ರಹಿತನೆ || ೨ ||
ಅಭಿನವ ಜನಾರ್ಧನ ವಿಠ್ಠಲನ ಧ್ಯಾನಿಸುವ ಪೇಳಮ್ಮಯ್ಯ
ಅಭಿವಂದಿತರಿಗೆ ಅಖಿಲಾರ್ಥಗಳ ಸಲ್ಲಿಸುವ ಪೇಳಮ್ಮಯ್ಯ
ನಭಮಣಿಯಂದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇಂದ್ರಯತಿ ಅಬುಜ ಭವಾಂಡದೊಳು ಪ್ರಬಲ ಕಾಣಮ್ಮ || ೩ ||