ಬೋಧವೊಂದೇ ಬ್ರಹ್ಮನಾದವೊಂದೇ

Category: ಶ್ರೀಕೃಷ್ಣ

Author: ಶಿಶುನಾಳ ಷರೀಫ್

ಬೋಧವೊಂದೇ ಬ್ರಹ್ಮನಾದವೊಂದೇ
ಸಾಧನ ಮಾಡುವ ಹಾದಿ ಒಂದೇ
ಆದಿ ಪಥ ಒಂದೇ ॥

ಬಿಂದು ಒಂದೇ ನಿಜಾನಂದ ಒಂದೇ
ತಂದೆ ಸದ್ಗುರು ಗೋವಿಂದ ಒಂದೇ
ಅಂದಿಗಿಂದಿಗೊಂದೇ ॥

ದೋಷ ಒಂದೇ ನಿರ್ದೋಷ ಒಂದೇ
ಶಿಶುನಾಳಾಧೀಶನ ಭಾಷೆ ಒಂದೇ
ಭವನಾಶ ಒಂದೇ ॥