ಶ್ರದ್ಧೆಯ ಸರೋವರದಿ
Category: ಶ್ರೀದೇವಿ
Author: ವಚನವೇದ
ಶ್ರದ್ದೆಯ ಸರೋವರದಿ ತಾಯ ನಾಮದ ನೌಕೆ
ತೇಲುತಿದೆ ನೋಡು |
ಗುರುಕರುಣೆಯಲಿ ಕಲಿತ ಸಾಧನಾದಿಗಳಿಂದ
ಭವಜಲಧಿ ಪಾರವನು ಸೇರಬಹುದು ನಾವು ||
ಮೃತ್ಯುಂಜಯನೆ ತಾನು ಹುಟ್ಟುಹಾಕುತಲಿರಲು
ಬಿರುಗಾಳಿಯಲಿ ನೌಕೆ ಮುಳುಗಿ ಹೋಗುವುದೆಂಬ
ಭಯವೇಕೆ ನಿನಗೆ |
ತಾಯ ಶ್ರೀಪಾದವನೆ ನಂಬಿದವಗೆ ||