ಗಿರಿಯಲ್ಲದೇ ಹುಲ್ಲು ಮರಡಿಯಲಾಡುವುದೇ
Category: ಶ್ರೀಶಿವ
Author: ಅಕ್ಕಮಹಾದೇವಿ
ಗಿರಿಯಲ್ಲದೇ ಹುಲ್ಲು ಮರಡಿಯಲಾಡುವುದೇ ನವಿಲು
ಕೊಳನಲ್ಲದೆ ಕಿರಿವೆಳ್ಳಕೆಳೆಸುವುದೇ ಹಂಸೆ
ಮಾಮರ ತಳಿತಲ್ಲದೆ ಸ್ವರಗೈವುದೇ ಕೋಗಿಲೆ ॥
ಪರಿಮಳವಿಲ್ಲದ ಪುಷ್ಪಕೆಳಸುವುದೇ ಭ್ರಮರ
ಎನ್ನದೇವ ಚೆನ್ನಮಲ್ಲಿಕಾರ್ಜುನನಲ್ಲದೆ
ಅನ್ನಕ್ಕೆಳಸುವುದೇ ಎನ್ನ ಮನ
ಕೇಳಿರೇ ಕೆಳದಿಯರಿರಾ ॥