ನೀರಜಾಕ್ಷಿ ಕಾಮಾಕ್ಷಿ ನೀರದ ಚಿಕುರೇ ತ್ರಿಪುರೇ
Category: ಶ್ರೀದೇವಿ
Author: ಮುತ್ತುಸ್ವಾಮಿ ದೀಕ್ಷಿತರ್
ನೀರಜಾಕ್ಷಿ ಕಾಮಾಕ್ಷಿ ನೀರದ ಚಿಕುರೇ ತ್ರಿಪುರೇ ॥
ಶಾರದಾಂಬುಜನಯನೇ ಸಾರಸಚಂದ್ರಾನನೇ
ನೀರಜಪಾದೇ ವರದೇ ತಾರಯ ಮಾಂ ತತ್ತ್ವಪದೇ॥
ಗೌರೀ ಹಿಂದೋಳಾದ್ಯುತಿ ಹೀರಮಣಿಮಯಾಭರಣೇ
ಶೌರಿ ವಿರಿಂಚಿ ವಿನುತ ಶಿವಶಕ್ತಿಮಯ ನವಾವರಣೇ ॥
ನಾರೀಮಣ್ಯಾದ್ಯರ್ಚಿತ ನವನಾದಾಂತಃಕರಣೇ
ಸೂರಿಜನ ಸಂಸೇವಿತ ಸುಂದರ ಗುರುಗುಹ ಚರಣೇ ॥