ನಿರವಧಿ ಸುಖದ ನಿರ್ಮಲ ರೂಪ
Category: ಶ್ರೀರಾಮ
Author: ತ್ಯಾಗರಾಜ
ನಿರವಧಿ ಸುಖದ ನಿರ್ಮಲ ರೂಪ
ನಿರ್ಜಿತ ಮುನಿಶಾಪ ॥
ಶರಧಿಬಂಧನ ನತ ಸಂಕ್ರಂದನ
ಶಂಕರಾದಿ ಗೀಯಮಾನ ಸಾಧುಜನ ಸುಸದನ ॥
ಮಾಮವ ಮರಕತಮಣಿನಿಭದೇಹ
ಶ್ರೀಮಣಿಲೋಲ ಶ್ರಿತಜನಪಾಲ
ಭೀಮಪರಾಕ್ರಮ ಭೀಮನರಾರ್ಚಿತ
ತಾಮಸರಾಜಸಮಾನಸದೂರ
ತ್ಯಾಗರಾಜವಿನುತಚರಣ ॥