ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮವು

Category: ಶ್ರೀರಾಮ

Author: ಪುರಂದರದಾಸ

ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮವು |
ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ॥
'
ಭಕ್ತಿರಸದಲಿ ತನ್ನ ಚಿತ್ತಪರವಶವಾಗಿ
ಅಚ್ಚುತನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ ॥

ಸೀತಾರಾಮನ ದಿವ್ಯನಾಮವ ಅಂತರಂಗದೊಳಿಟ್ಟು
ಚಿಂತೆಯೆಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ ॥

ಕಣ್ಣೊಳಗಿದ್ದ ಮೂರುತಿ ತನ್ನೊಳಗೆ ತಂದು
ಘನ್ನಪೂರ್ಣ ಪುರಂದರ ವಿಟ್ಠಲರಾಯನ ಭಜಿಸಿದಲ್ಲದೆ ॥