ಶ್ರೀ ರಾಮಕೃಷ್ಣಪ್ರಭೋ ದೇವ

Category: ಶ್ರೀರಾಮಕೃಷ್ಣ

Author: ಸ್ವಾಮಿ ಹರ್ಷಾನಂದ

ಶ್ರೀರಾಮಕೃಷ್ಣಪ್ರಭೋ ದೇವ || ಪ ||
ಆರತಿಯೆತ್ತುವೆ ಹರಿಹರಬ್ರಹ್ಮನೆ || ಅ.ಪ. ||

ಭವಬಂಧನವನು ಖಂಡಿಸುವವನೆ
ನವನವ ರೂಪಧರ ||

ಭಕುತರ ಪ್ರೇಮಕೆ ಮಣಿದರು ನಲಿದರು
ನಿಷ್ಕಲ ನಿರುಪಮನೆ ||

ಸಂಪದ ರಾಜಪದ ಇಂದ್ರಪದ ಈಯದೆ
ಶ್ರೀಪದ ಕೊಡು ಹರಿಯೇ ||

ಹೃದಯಕಮಲದಲಿ ಸತತವು ನೆಲಸುತ
ಮೋದವ ಸುರಿಸು ಗುರೋ ||