ಯಾರೆ ರಂಗನ ಯಾರೆ ಕೃಷ್ಣನ ಕರೆಯ ಬಂದವರು
Category: ಶ್ರೀಕೃಷ್ಣ
Author: ಪುರಂದರದಾಸ
ಯಾರೆ ರಂಗನ ಯಾರೆ ಕೃಷ್ಣನ ಕರೆಯ ಬಂದವರು ॥
ಗೋಪಾಲಕೃಷ್ಣನ ಪಾಪವಿನಾಶನ
ಈ ಪರಿಯಿಂದಲಿ ಕರೆಯ ಬಂದವರು ॥
ವೇಣುವಿನೋದನ ಪ್ರಾಣಪ್ರಿಯನ
ಜಾಣೆಯರರಸನ ಕರೆಯ ಬಂದವರು ॥
ಕರಿರಾಜವರದನ ಪರಮಪುರುಷನ
ಪುರಂದರವಿಟ್ಠಲನ ಕರೆಯ ಬಂದವರು ॥