ನೀನೇ ಅನಾಥಬಂಧು ಕಾರುಣ್ಯಸಿಂಧು
Category: ಶ್ರೀಕೃಷ್ಣ
Author: ಪುರಂದರದಾಸ
ನೀನೇ ಅನಾಥಬಂಧು ಕಾರುಣ್ಯಸಿಂಧು ॥
ಪತಿಗಳೈವರಿದ್ದರೇನು
ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದನೆಂದರೆ
ಅತಿ ವೇಗದಿ ಬಂದೊದಗಿದೆ ಕೃಷ್ಣಾ॥
ಶಿಲೆಯ ಮೆಟ್ಟಿ ಕುಲಕೆ ತಂದೆ
ಬಲಿಯ ಬೇಡಿ ಸತ್ಪದವಿಯನಿತ್ತೆ
ಸುಲಭದಿ ಭಜಿಸುವ ಭಕ್ತರ ಸಲಹುವ ನಮ್ಮ
ಚೆಲುವ ಪುರಂದರ ವಿಠ್ಠಲರಾಯ ॥