ನಿನ್ನ ಭಕುತಿ ಭೀರೋ ದೇವ

Category: ಶ್ರೀಕೃಷ್ಣ

Author: ಪುರಂದರದಾಸ

ನಿನ್ನ ಭಕುತಿ ಭೀರೋ ದೇವ
ಎನ್ನ ಮನ್ನಿಸಿ ಸಲಹುವರಾರೋ ॥

ಪನ್ನಗಶಯನ ಲಕ್ಷ್ಮೀರಮಣ
ವೇದ ಸನ್ನುತ ಪದ ಸರ್ವೇಶಾ
ಇನ್ನು ಬಿಡಿಸೋ ಮೋಹಪಾಶ
ಆಪದ್ಬಾಂಧವ ಶ್ರೀನಿವಾಸ ॥

ನಾರದ ಗಾನವಿಲೋಲ
ಭೂರಿ ಭಕ್ತರ ಪರಿಪಾಲ .
ಶ್ರೀರಮಣಾ ಕರುಣಾಕರ ದೇವ
ನೀರದಶ್ಶ್ಕಾಮ ಕೌಸ್ತುಭಾಲ ॥

ಕರಿವರವರದ ಅಪ್ರಮೇಯ
ಅರಿತು ಪಾಲಿಸೋ ಯೋಗಿಜ್ಞೇಯ
ಸುರಮುನಿಹೃದಯಾ ನೀನೇ ಕಾಯೋ
ಗುರುಪುರಂದರ ವಿಟ್ಠಲರಾಯ ॥