ಶ್ರೀಹರಿ ಕಾಯೋ ಕರುಣಾನಿಧೇ

Category: ಶ್ರೀಕೃಷ್ಣ

Author: ಮಹೀಪತಿದಾಸ

ಶ್ರೀಹರಿ ಕಾಯೋ ಕರುಣಾನಿಧೇ ||
ಖಗವರಗಮನ ಕರುಣಾನಿಧೇ ||

ಜ್ಞಾನ ಧ್ಯಾನದ ನಿಜ ಸಾಧನವರಿಯೆ |
ನೀನೆ ಗತಿಯೆನುತ ಮಾಡುವೆ ನಮನ ||

ಘೋರ ಸಂಸಾರದಿ ತಾಪದಿ ನೊಂದೆ |
ವಾರಿಭವಭಯಹರ ಅಘಕುಲಶಮನ ||

ಗುರು ಮಹೀಪತಿ ಪ್ರಭು ಅನಾಥಬಂಧು |
ಚರಣಕಮಲಗಳಲಿರಿಸೆನ್ನ ಮನವ ||