ಮಾತಾಪಿತರು ನಿನಗೆ ಅಂದೆ ಮಾರಿದರೆನ್ನ
Category: ಶ್ರೀಕೃಷ್ಣ
Author: ಪುರಂದರದಾಸ
ಮಾತಾಪಿತರು ನಿನಗೆ ಅಂದೆ ಮಾರಿದರೆನ್ನ
ನಾಥನೆ ನೀನೆನ್ನ ಸಲಹದಿದ್ದರೆ ದೇವ ॥
ಏತಕೆ ಭಕ್ತವತ್ಸಲ ನೆನಿಸಿಕೊಂಡೆ
ನಾ ತಡೆಯೆನೋ ನಿನ್ನ ಬಿರುದಿಗಂಜುವನಲ್ಲ॥
ಸಾತ್ತ್ವಿಕದೈವವೆ ಸಲಹೊ ಎನ್ನ ಪ್ರ-
ಖ್ಯಾತಪುರುಷ ಶ್ರೀಪುರಂದರವಿಟ್ಟಲ ॥