ಸಕಲಕೆಲ್ಲಕೆ ನೀನೇ

Category: ಶ್ರೀಶಿವ

Author: ಮುಪ್ಪಿನ ಷಡಕ್ಷರಿ

ಸಕಲಕೆಲ್ಲಕೆ ನೀನೇ ಅಕಲಂಕ ಗುರುವೆಂದು
ನಿಖಿಲ ಶಾಸ್ತ್ರವು ಪೇಳುತಿರಲರಿದೆನು ||

ಅವರವರ ದರುಶನಕೆ ಅವರವರ ದೇಶದಲಿ
ಅವರವರಿಗೆಲ್ಲ ಗುರು ನೀನೊಬ್ಬನೇ |
ಅವರವರ ಭಾವಕ್ಕೆ ಅವರವರ ಅರ್ಚನೆಗೆ
ಅವರವರಿಗೆ ದೇವ ನೀನೊಬ್ಬನೇ ||

ಹೋರಾಟವಿಕ್ಕಿಸಲು ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ ಎಲ್ಲ ದೇವನೇ |
ಆರೂ ಅರಿಯರು ನೀನು ಬೇರಾದ ಪರಿಗಳನು
ಮಾರಾರಿ ಶಿವ ಷಡಕ್ಷರಿಲಿಂಗವೆ ||