ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ

Category: ಶ್ರೀರಾಮಕೃಷ್ಣ

Author: ಸ್ವಾಮಿ ಹರ್ಷಾನಂದ

ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ
ಹೇ ರಾಮಕೃಷ್ಣ ಕೃಪೆ ತೋರು ಒಮ್ಮೆ ॥

ನೀ ರಾಮನಂತೆ ನೀ ಕೃಷ್ಣನಂತೆ
ನೀ ರುದ್ರ ನೀ ಬ್ರಹ್ಮ ಎನುತಿಹರು ಭಕುತರು॥

ಪತಿತಪಾವನನಂತೆ ಭಕ್ತವತ್ಸಲನಂತೆ
ಯೋಗಿಗಳ ಜ್ಞಾನಿಗಳ ಪರಮಗುರಿ ನೀನಂತೆ ॥

ಅಂಥವರು ಇಂಥವರು ರಾಮಕೃಷ್ಣರು ಎಂದು
ಮನವು ಬಂದಂತೆಲ್ಲಾ ಹೊಗಳುತಿದೆ ಜನವೃಂದ ॥

ಎನಗಿತ್ತ ದರುಶನವೆ ಉಳಿಸಬಲ್ಲದು ನಿನ್ನ '
ಮಾನವನು ಕೀರ್ತಿಯನು ಉಳಿದೆಲ್ಲ ಬಿರುದುಗಳನು ॥

ದಯತೋರಿ ಬಂದೊಮ್ಮೆ ನಲಿದಾಡಿ ಕಣ್ಮುಂದೆ
ನೀ ಎನ್ನ ಜೀವನವ ಪೂರ್ಣವಾಗಿಸು ತಂದೆ! ॥