ಮಂಗಳಮೂರತಿ ಮಂಗಳೇ ತಾಯೇ

Category: ಶ್ರೀಶಾರದಾದೇವಿ

ಮಂಗಳಮೂರತಿ ಮಂಗಳೇ ತಾಯೇ
ವಂಗದೇಶದಲಿ ಇಳಿದಿಹೆ ಮಾಯೇ ॥

ಅನ್ನವ ನೀಡಲು ಮೂರುಲೋಕಕೆ
ಅನ್ನದೇ ನೀನು ಬಂದಿಹೆಯೇನು ॥

ಮಾನವ ಕುಲದ ದುಃಖವ ಕಂಡು
ಮಮತಾಮಯಿ ನೀ ಬಂದಿಹೆಯೇನು ॥

ಬೆಂದಿಹ ನೊಂದಿಹ ಜಗದ ಜನರಿಗೆ
ಚಂದ್ರಕಿರಣವೋಲ್‌ ತಂಪನು ಬೀರಲು
ಬಂದೆಯೇನು ನೀ ಬಂದಿಹೆಯೇನು ॥