ತಾಯಿ ಶಾರದೆ ನಾವು ನಿನ್ನಯ

Category: ಶ್ರೀಶಾರದಾದೇವಿ

Author: ಸ್ವಾಮಿ ಹರ್ಷಾನಂದ

ತಾಯಿ ಶಾರದೆ ನಾವು ನಿನ್ನಯ
ಚರಣಕಮಲಕೆ ನಮಿಪೆವು |
ಪರಮಪಾವನೆ ನಿನ್ನ ಪುತ್ರರ
ಪ್ರೇಮದಿಂದಲಿ ಪಾಲಿಸು ॥

ದೇವದೇವನ ಹೃದಯದಲ್ಲಿನ
ಕರುಣೆಯೆಂಬುವ ಗಂಗೆ ನೀ।
ಆರ್ತಜೀವರ ಶಾಂತಗೊಳಿಸಲು
ಹರಿದು ಬಂದಿಹೆ ಶೀಘ್ರದಿ॥

ನಿನ್ನ ನಾಮದ ವಾರಿಯಲಿ ನಾ-
ವೆಲ್ಲ ಮೀಯುತ ಹರ್ಷದಿಂ!
ಶುದ್ಧರಾಗಲು ಮುಕ್ತರಾಗಲು
ಯತ್ನ ನಡೆಸುತಲಿರ್ಪೆವು ॥

ಸಾಧುಸಜ್ಜನ ದುಷ್ಪದುರ್ಜನ-
ರೆಲ್ಲ ನಿನ್ನಯ ಮಕ್ಕಳೇ।
ನಮ್ಮನೆಲ್ಲನು ಕೃಪೆಯ ತೋರುತ
ರಕ್ಷಿಸೀಗಲೆ ಮಾತೆಯೆ ॥