ಸತ್ಯ ಜ್ಞಾನ ತಪೋನಿಧಿಯೇ
Category: ಶ್ರೀಸ್ವಾಮಿ ವಿವೇಕಾನಂದ
Author: ಸ್ವಾಮಿ ತದ್ರೂಪಾನಂದ
ಸತ್ಯ ಜ್ಞಾನ ತಪೋನಿಧಿಯೇ
ವೀರ್ಯ ಧೈರ್ಯ ತ್ಯಾಗಗಣಿಯೇ |
ಭೃತ್ಯ ಜನರ ನಮನವಿದನು
ಸ್ವೀಕರಿಸು ನರೇಂದ್ರಮುನಿಯೇ ||
ಭವದ ಭ್ರಾಂತಿ ಬವಣೆ ನೀಗೆ
ಹರನೆ ನರನ ವೇಷ ತಾಳ್ದೆ
ಕವಿದ ಭ್ರಮೆಯ ಕತ್ತಲಳಿಸಿ
ದಿವ್ಯ ಜ್ಞಾನ ಪ್ರಭೆಯ ತೋರ್ದೆ
ಶಾಂತಿ ಕಾಂತಿ ನೀಡಿದೆ ||
ಹೇಡಿ ಜನರ ಹೃದಯದಲ್ಲಿ
ಆತಶ್ರದ್ದೆಶೂನ್ಯರಲ್ಲಿ
ಸಿಡಿಲ ಸ್ನಿಗ್ಧ ಮೊಳಗಿನಿಂದ
ಶಕ್ತಿ ಶ್ರದ್ದೆ ಹೊಳೆ ಹರಿಸಿದೆ
ಧೈರ್ಯ ಸ್ಥೈರ್ಯ ಬಿತ್ತಿದೆ ||
ಕ್ಲೇಶ ಕಷ್ಟಗ್ರಸ್ತ ಜನಕೆ
ಅಮೃತಸುಖದ ಧಾಮವಾದೆ
ಈಶರೂಪಿ ರಾಮಕೃಷ್ಣ
ಶಿಷ್ಯರತ್ನ ಶಿಖಾಮಣಿಯೇ
ಜ್ಞಾನ ಸೌಖ್ಯದಾತನೆ ||