ನಿನ್ನ ಅನುಪಮ ಪ್ರೇಮಕಾಂತಿಯ

Category: ಇತರೆ

Author: ವಚನವೇದ

ನಿನ್ನ ಅನುಪಮ ಪ್ರೇಮಕಾಂತಿಯ
ವದನ ದರುಶನವಾಗಲು
ಜಗದ ಜಂಜಡ ದುಗುಡುಗಳ ಭಯ
ನನ್ನ ಬಳಿಗೇ ಬಾರದು ॥

ಉದಯ ಸೂರ್ಯನ ಮೊದಲ ಕಿರಣವು
ಕತ್ತಲೆಯ ಕಳೆವಂದದಿ
ನಮ್ಮ ಎದೆಯೊಳು ನಿನ್ನ ಬೆಳಕೇ
ಮೂಡಿ ನೋವನು ನೀಗಿ ಮನದೊಳು
ನಿನ್ನ ಪ್ರೇಮವನೆರೆವುದು ॥

ನಿನ್ನ ಕರುಣಾ ಪ್ರೇಮಗಳ ನಾ
ನನ್ನ ಮನದಲಿ ನೆನೆದರೆ
ಹರ್ಷ ಬಾಷ್ಪದ ಹೊನಲು ಹರಿವುದು
ಯಾವ ತಡೆಯೂ ಇಲ್ಲದೆ ॥

ಜಯವು ಕರುಣಾಮಯನೆ ನಿರುತವು
ನಿನ್ನ ಒಲವನೆ ಸಾರುವೆ
ನಿನ್ನ ಕರ್ಮದಿ ನನ್ನ ಪ್ರಾಣವು
ಸಮೆಯಲೆನ್ನುತ ಬೇಡುವೆ ॥