ಯಾರಿಗೆ ಯಾರುಂಟು ಎರವಿನ ಸಂಸಾರ
Category: ವೈರಾಗ್ಯ
Author: ಪುರಂದರದಾಸ
ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ॥
ಬಾಯಾರಿತು ಎಂದು ಬಾವಿ ನೀರಿಗೆ ಪೋದೆ
ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೇ ॥
ಬಿಸಿಲುಗಾಳಿಗಾಗಿ ಮರದ ಛಾಯೆಗೆ ಪೋದೆ
ಮರ ಬಗ್ಗಿ ಶಿರದ ಮೇಲೊರಗಿತು ಹರಿಯೇ ॥
ತಂದೆ ಶ್ರೀಪುರಂದರ ವಿಟ್ಠಲ ನಾರಾಯಣ
ನಾ ಹೋಗೋ ಹೊತ್ತಿಗೆ ನೀ ಕಾಯೋ ಹರಿಯೇ ॥