ಸದಾ ಎನ್ನ ಹೃದಯದಲ್ಲಿ
Category: ಶ್ರೀಕೃಷ್ಣ
Author: ವಿಜಯದಾಸ
ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ |
ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ ||
ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ |
ಗಾನಲೋಲನ ಕುಳ್ಳಿರಿಸಿ ಜ್ಞಾನದಿಂದ ಭಜಿಸುವೆನೋ ||
ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ |
ಮುಕ್ತನಾಗಬೇಕು ಎಂದು ಮುತ್ತಿನ ಆರತಿಯೆತ್ತುವೆನೋ ||
ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ|
ಘನ್ನಮಹಿಮ ವಿಜಯವಿಟ್ಠಲ ನಿನ್ನ ಭಕ್ತನ ಕೇಳೋ ಸೊಲ್ಲ||