ಉಳ್ಳವರು ಶಿವಾಲಯ
Category: ಶ್ರೀಶಿವ
Author: ಬಸವಣ್ಣ
ಉಳ್ಳವರು ಶಿವಾಲಯ ಮಾಡುವರಯ್ಯ |
ನಾನೇನ ಮಾಡಲಿ ಬಡವನಯ್ಯಾ ||
ಎನ್ನ ಕಾಲೇ ಕಂಬವು ದೇಹವೇ ದೇಗುಲ |
ಶಿರವೇ ಹೊನ್ನ ಕಳಶವಯ್ಯ||
ಸ್ಥಾವರಕಳಿವುಂಟು ಜಂಗಮಕೆ ಅಳಿವಿಲ್ಲ!
ಅಯ್ಯಾ ಕೇಳಯ್ಯ ಕೂಡಲಸಂಗಮ ದೇವ ||
Author: ಬಸವಣ್ಣ
ಉಳ್ಳವರು ಶಿವಾಲಯ ಮಾಡುವರಯ್ಯ |
ನಾನೇನ ಮಾಡಲಿ ಬಡವನಯ್ಯಾ ||
ಎನ್ನ ಕಾಲೇ ಕಂಬವು ದೇಹವೇ ದೇಗುಲ |
ಶಿರವೇ ಹೊನ್ನ ಕಳಶವಯ್ಯ||
ಸ್ಥಾವರಕಳಿವುಂಟು ಜಂಗಮಕೆ ಅಳಿವಿಲ್ಲ!
ಅಯ್ಯಾ ಕೇಳಯ್ಯ ಕೂಡಲಸಂಗಮ ದೇವ ||