ಎಲ್ಲಿರುವೆ ತಂದೆ ಬಾರೋ ಮಾರುತಿ
Category: ಶ್ರೀಹನುಮಂತ
Author: ಶೇಷಗಿರಿದಾಸ
ಎಲ್ಲಿರುವೆ ತಂದೆ ಬಾರೋ ಮಾರುತಿ ॥
ಎಲ್ಲೆಲ್ಲಿ ನೋಡಿದರೆ ಅಲ್ಲಿ ನಿನ್ನ ಕೀರುತಿ
ಎಲ್ಲಿ ನೋಡಲು ನಿನ್ನ ಕೂಡಿರುವ ಶ್ರೀಪತಿ ॥
ಅಂದು ರಘುನಂದನನ ವಂದಿಸುತ ಇಂದಿರೆಯ
ಕಂಡು ಕೊಂಡಾಡಿದ್ಯಲ್ಲೋ॥
ರಂಗನರ್ಧಾಂಗಿಗೆ ಉಂಗುರವಿತ್ತು ವನ
ಭಂಗವ ಮಾಡಿದ್ಯಲ್ಲೋ॥
ರಕ್ಕಸರ ಸೊಕ್ಕು ಮುರಿದು ಲಂಕೆಗೆ ಉರಿ
ಇಕ್ಕಿ ಓಡಾಡಿದ್ಯಲ್ಲೋ ॥
ಮಂದಮತಿ ಇಂದ್ರಜಿತು ನಿಂದಿಸಲು ನೀ ದಶ
ಕಂಧರನ ಗುದ್ದಿದ್ಯಲ್ಲೋ॥
ಶೇಷಗಿರಿವಾಸನ ದಾಸನೇ ನಿನ್ನ
ದಾಸನಲಿ ದಯಮಾಡೋ ಮಾರುತಿ ॥