ಗಂಭೀರ ಗಜವದನ ಗಣನಾಥ ಸುಖಸದನ

Category: ಶ್ರೀಗಣೇಶ

ಗಂಭೀರ ಗಜವದನ ಗಣನಾಥ ಸುಖಸದನ
ಗೌರೀತನೂಭವನ ಗೈವೆ ಪುಣ್ಯಸರಣ ॥

ವಿದ್ಯಾಬುದ್ದಿ ವಿದಾತ ವೇದಾಗಮಾತೀತ
ಆದಿಪೂಜ್ಯ ಪ್ರಶಾಂತ ಮೋದಕಪ್ರಿಯ ವಿನುತ ॥

ನಿತ್ಯ ಸತ್ಯ ಸತೇಜ ಪ್ರಥಮಾಶ್ರಮವಿರಾಜ
ನುತಪಾಲ ಗುಣ ಸಹಜ ಕ್ಷಿತಿಗೊಡೆಯ ಗಣರಾಜ ॥

ಕರಪಿಡಿದು ನಡೆಸೆನ್ನ ಹರತನುಜ ವರಗಣಪ
ಉರಗಾಚಲನ ಸಿರದಿ ಕರವಿರಿಸಿ ಪೊರೆ ದೇವ ॥