ಅಂಜನಾಸುತ ಹನುಮೇಶ

Category: ಶ್ರೀಹನುಮಂತ

ಅಂಜನಾಸುತ ಹನುಮೇಶ
ಕದರಮಂಡಲಗಿ ಪುರನಿವಾಸಶ್ರೀ

ಶತಯೋಜನ ವಿಸ್ತೀರ್ಣ ಶರಧಿಯನು
ದಾಟಿದ ರಾಮನ ಭಕುತಾಗ್ರಣಿ ನೀನು

ರಾಮನ ದಯದಿಂ ರಾಮನ ಗೆಲಿದಿಹ
ಸೋಮಧರಾಂಶಜ ಧರೆಯ ಪೊರೆಯುತಿಹ

ಮಾಧವ ಭೀಮ ಹನುಮರಮರನಾಮ
ಉರಗಾಚಲನಲಿ ನಿಲಿಸು ನಿಜಪ್ರೇಮ