ನಗುತ ಬಂದು ನಿಂತ ಹನುಮಂತ
Category: ಶ್ರೀಹನುಮಂತ
ನಗುತ ಬಂದು ನಿಂತ ಹನುಮಂತ
ನಲುಮೆ ತೋರೆ ಶಾಂತಿ ನೀಡೆ ಮಾರುತ
ರಾಜಯೋಗಿ ತಾ ರಾಮನ ದೂತ
ರಾಮಧ್ಯಾನದಿ ಮರೆತು ತನ್ನ ತಾ
ರಾಮನನ್ನೆ ಸಾಸಿರದಲಿ ನೋಡುತ ॥
ಬ್ರಹ್ಮಚಾರಿ ತಾ ಅಂಜನಾ ಸುತ
ಬ್ರಹ್ಮಹ್ಸಾನಿ ಪರ ಬ್ರಹ್ಮನವನೆ ತಾ
ಬ್ರಹ್ಮಪುರಕೆ ಸ್ವಾಮಿ ಆತ ಶಿವ ತಾ||
ಸರಳ ಸಹೃದಯರ ಪ್ರಾಣದೇವತ
ಉರಗಾಚಲವಾಸನ ದಾಸನು ತಾ
ಪರಮಪುಣ್ಯ ಪಾವನ ಮಂಗಳ ತಾ॥