ಸಾರದ ರೂಪ ತಾಳಿ
Category: ಶ್ರೀದೇವಿ
Author: ಸ್ವಾಮಿ ಶಾಸ್ತ್ರಾನಂದ

ಸಾರದ ರೂಪತಾಳಿ ಬಂದಿಹಳು ತಾಯಿ ಕಾಳಿ
ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ||

ಆದ್ಯಾಶಕ್ತಿ ನೀ ಮಾತೆ ಸರ್ವಜೀವಮುಕ್ತಿದಾತೆ|
ಮಹಾಲಕ್ಷ್ಮೀ ಸರಸ್ವತಿ ಗುಪ್ತರೂಪ ಜ್ಞಾನದಾತೆ||

ಸೀತಾ ರಾಧಾ ಅನ್ನಪೂರ್ಣಾ
ಕಾಯ ಪಡೆದ ಭುವಿಯು ಧನ್ಯ|
ಪ್ರೇಮದಿಂದ ತಾಯಿಯೆಂದು
ಕರೆವ ಮನುಜ ಜಗದಿ ಮಾನ್ಯ||

ದೀನಜನರ ಉದ್ಧರಿಸೆ
ದೀನರೂಪ ತಾಳಿ ಬಂದೆ|
ಅಭಯೇ ನೀನು ಉಭಯಕರದಿ
ಅಭಯವನ್ನು ನೀಡಲೆಂದೆ||

----ಸ್ವಾಮಿ ಶಾಸ್ತ್ರಾನಂದ