ಗಿರಿಜಾಪತಿ ಶಿವ ಉಮಾಮಹೇಶ
Category: ಶ್ರೀಶಿವ
ಗಿರಿಜಾಪತಿ ಶಿವ ಉಮಾಮಹೇಶ |
ಪರಿಪಾಲನ ಜಗ ಪರಮಕೃಪಾಲ ॥
ಗಂಗಾಧರ ನಟರಾಜ ಡಮರುಧರ |
ಮಂಗಲರೂಪ ಮಹಾದೇವ ಶಂಕರ ॥
ಗಣಪತಿಪಿತ ಪರಬ್ರಹ್ಮ ಪರಾತ್ಪರ ।
ತ್ರಿನಯನ ಗಜಚರ್ಮಾಂಬರಧರ ಹರ ॥
ಸುರನರಕಿನ್ನರ ಜಗಕೇ ಸ್ವಾಮಿ ।
ಉರಗಾಚಲ ಸ್ಥಿರವಾಸಿ ನಮಾಮಿ ॥