ಮಾತೃಹೃದಯದೆನ್ನ ಪೊರೆದೆ
Category: ಶ್ರೀದೇವಿ
ಮಾತೃಹೃದಯದೆನ್ನ ಪೊರೆದೆ ಸತ್ಯಚಿದಾನಂದ ವರದೆ
ಕರ್ತೃ ಕರ್ಮ ಕ್ರಿಯೆ ನೀನೆ ನಿಮಿತ್ತ ಮಾತ್ರ ಇರುವೆ ನಾನೆ ॥
ಘನವಿಘೋರ ದುರಿತನೆಲ್ಲ ಕ್ಷಣದಿ ಕರಗಿಸಿದೆ ಎಲ್ಲ
ನನಸಗೈೆದೆ ಕನಸನೆಲ್ಲ ಜನನಿ ನೀನೆ ಭುವನಕೆಲ್ಲ॥
ಸಿರಿ ಶಾರದೆ ಗೌರಿ ನೀನೆ ಹರಿ ಅಜ ಶಿವ ಶಕ್ತಿ ನೀನೆ
ಗಿರಿಜೆ ಅನ್ನಪೂರ್ಣೆ ನೀನೆ ತರಿದೆದುರುಳರೆಲ್ಲ ನೀನೆ ॥
ಶರಣು ತಾಯೆ ಗಾಯತ್ರೀ ಸ್ಥಿರದಿ ನೀಡೆಮಗೆ ಸನ್ಮತಿ
ಸುರನರಮುರಿ ವಿನುತೆ ಲಲಿತೆ ಉರಗಾಚಲಸ್ಥಿತೆ ವಿಧಾತೆ ॥