ಕೃಷ್ಣ ನೀ ಬೇಗನೆ ಬಾರೊ

Category: ಶ್ರೀಕೃಷ್ಣ

ಕೃಷ್ಣ ನೀ ಬೇಗನೆ ಬಾರೊ ॥ಪ॥
ಬೇಗನೆ ಬಾರೊ ಮುಖವನ್ನೆ ತೋರೊ ॥ ಅ. ಪ.॥

ಹುಟ್ಟಿದ್ದು ಮಧುರೆ ಬೆಳದಿದ್ದು ಗೋಕುಲ
ಜಲಕ್ರೀಡೆಯಾಡಿದ್ದು ಯಮುನಾತೀರ ॥೧॥

ಕಾಲಲಂದುಗೆ ಗೆಜ್ಜೆ ದೀಲದ ಬಾವುಲಿ
ನೀಲವರ್ಣನೆ ನಾಟ್ಯವಾಡುತ ಬಾರೊ ॥ ೨॥

ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳೊಳು ಹಾಕಿದ ವೈಜಯಂತಿ ಮಾಲೆ ॥೩॥

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೆಯ್ಯುಳು ಗಮ್ಮ ॥ ೪॥

ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದುದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ ॥೫॥