ಸಿರಿ ರಾಮಕೃಷ್ಣ ಚರಣತಲದಿ

Category: ಶ್ರೀರಾಮಕೃಷ್ಣ

Author: ಸ್ವಾಮಿ ಪುರುಷೋತ್ತಮಾನಂದ

ಸಿರಿ ರಾಮಕೃಷ್ಣ ಚರಣತಲದಿ
ಶರಣೆನು ಮನವೇ ||

ಸಕಲ ತೀರ್ಥ ಸಕಲ ಶಾಸ್ತ್ರ
ಸಾರ ನೀನಹೆ |
ನಿಖಿಲ ಭಕುತ ಹೃದಯಕಮಲ
ತರಣಿ ನೀನಹೆ | ಎನುತ ||

ಪ್ರೇಮ ಭಕುತಿ ಕಲಿಯುಗದಲಿ
ತಾರಕ ಶಕುತಿ |
ಪ್ರೇಮರೂಪ ಪ್ರೇಮಾನಂದ
ಮಂಗಲ ಮೂರುತಿ | ಎನುತ ||

ದಕ್ಷಿಣೇಶ್ವರ ಲೀಲಾಕ್ಷೇತ್ರ
ಪರಮಪವಿತ್ರ |
ಮುಮುಕ್ಷು ಜನರ ಮುದದಿ ಕರೆದೆ
ನೀನೆ ಸುಮಿತ್ರ | ಎನುತ ||