ಸಿರಿ ವಾಣಿ ಗೌರಿ
Category: ಶ್ರೀಶಾರದಾದೇವಿ
Author: ಸ್ವಾಮಿ ಹರ್ಷಾನಂದ
ಸಿರಿ ವಾಣಿ ಗೌರಿ ಹೇ ಶಾರದಾಂಬೆ
ಸೂತ್ರಧಾರಿಣಿ ಜಗವೇ ಬೊಂಬೆ ||
ಶ್ರೀರಾಮಕೃಷ್ಣರಿಂ ಪೂಜಿತೇ ಮಾತೇ
ಪರಾಶಕ್ತಿ ಪರಮೇಶ್ವರದಯಿತೇ ||
ದಯಾಸಾಗರೇ ರಕ್ಷಿಸು ಎನ್ನನು
ಸ್ಮಯದಿಂ ಭಯದಿಂ ದೂಷಿತಶಿಶುವನು |
ಭವಸಾಗರದಿಂ ಕಾಪಿಡು ಜನರನು
ಅವನೀಕುವರಿ ನೀಡುತ ಕರವನು ||