ಪರಮಪುರುಷ ನೀ ನೆಲ್ಲಿಕಾಯಿ
Category: ಇತರೆ
Author: ಕನಕದಾಸ
ಪರಮಪುರುಷ ನೀ ನೆಲ್ಲಿಕಾಯಿ ||ಪ||
ಸರಸಿಯೊಳಗೆ ಕರಿ ಕೂಗಲುಕಾಯಿ ||ಅ||
ಹಿರಿದು ಮಾಡಿದ ಪಾಪ ನುಗ್ಗೆ ಕಾಯಿ
ಹರಿ ನಿನ್ನ ಧ್ಯಾನ ಬಾಳೆಕಾಯಿ
ಸರುವ ಜೀವರಿಗುಣಿಸಿಯುಂ ಬದನೆಕಾಯಿ
ಅರಿಷಡ್ವರ್ಗಗಳೊದಗಿಲಿ ಕಾಯಿ ||1||
ಕ್ರೂರ ವ್ಯಾಧಿಗಳೆಲ್ಲ ಹೀರೆಕಾಯಿ
ಘೋರ ದುಷ್ಕೃತಗಳು ಸೋರೆಕಾಯಿ
ಭಾರತ ಕಥೆ ಕರ್ಣ ತುಪ್ಪಿರೆ ಕಾಯಿ
ವಾರಿಜಾಕ್ಷನೆ ಗತಿಯೆಂದಿಪ್ಪೆ ಕಾಯಿ ||2||
ಮುರಹರ ನಿನ್ನವರು ಅವರೆಕಾಯಿ
ಗುರು ಕರುಣಾಮೃತ ಉಣಸಿಕಾಯಿ
ವರ ಭಕ್ತ ವತ್ಸಲನೆಂಬ ಹೆಸರಕಾಯಿ
ಸಿರಿಯಾದಿ ಕೇಶವ ನಿನ್ನ ನಾಮ ಮೆಣಿಸೆಕಾಯಿ ||3||