ಹರಿದಾಸರ ಸಂಗ
Category: ಶ್ರೀಕೃಷ್ಣ
Author: ಪುರಂದರದಾಸ
ಹರಿದಾಸರ ಸಂಗ ದೊರಕಿತು ಎನಗೀಗ |
ವರಗುರು ಉಪದೇಶ ನೆರವಾಯ್ತು ||
ಮಾಯದ ಸಂಸಾರ ಮಮಕಾರ ತಗ್ಗಿತು |
ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲಸಿತು ||
ಏನೆಂದು ಹೇಳಲಿ ಆನಂದ ಸಂಭ್ರಮ
ಆ ನಂದಗೋಪನ ಕಂದನ ಮಹಿಮೆಯ |
ಎನ್ನ ವಂಶಗಳೆಲ್ಲ ಪಾವನವಾದವು
ಶ್ರೀಪುರಂದರವಿಟ್ಠಲಯ್ಯ ದೊರಕಿದ ||