ಕೊಟ್ಟುತೀರದು ನಿನ್ನ ಕರುಣೆಯ ಋಣವು

Category: ಶ್ರೀದೇವಿ

Author: ಪುರುಷೋತ್ತಮ ಕಾರಂತ

ಕೊಟ್ಟುತೀರದು ನಿನ್ನ ಕರುಣೆಯ ಋಣವು
ತೆತ್ತು ಕಳೆವುದೆ ತಾಯೆ ವಾತ್ಸಲ್ಯ ಕಣವು॥

ದುಷ್ಟನಲಿ ಗುಣವರಸಿ ಇಷ್ಟವನು ಕರುಣಿಸುವೆ
ಶಿಷ್ಟಸಂಗದಿ ನಲಿಯಲೆಷ್ಟು ಪುಣ್ಯವೊ ನನಗೆ।
ಕಷ್ಟಕಾನನದೊಳಗೆ ಭಕುತಿದೀವಿಗೆಯಿತ್ತೆ
ನಷ್ಟಜೀವನದೊಳಗೆ ನಿನ್ನಿಷ್ಟಸುಧೆಯೆಂದೆ॥

ಹಣ್ಣುಹೂಧನಕನಕ ಎಷ್ಟುಕಾಣಿಕೆ ಕೊಡಲೆ
ನನ್ನಿಷ್ಟ ಸುಖಭಾವಗಳನೆಲ್ಲ ಬಿಡಲೆ।
ನಿನ್ನ ಕರುಣೆಯ ಫಲವು ಈ ನನ್ನ ಜೀವನವು
ನನ್ನನ್ನೇ ಕೊಡವೆನಿದೊ ನಿನ್ನ ಋಣಕೆ॥