ಎತ್ತ ಹೋದರು ಸುತ್ತಲೆಲ್ಲೂ
Category: ವೈರಾಗ್ಯ
Author: ವಚನವೇದ
ಎತ್ತ ಹೋದರು ಸುತ್ತಲೆಲ್ಲೂ
ಆರಿಗಾರೂ ಇಲ್ಲ ಜಗದೊಳು
ಎಂಬುದನು ನೀ ನೆನಪಿಡು |
ಮಾಯೆಯೊಡ್ಡಿದ ಬಲೆಯೊಳಿದ್ದರು
ತಾಯ ಪಾದದಿ ಮನವಿಡು ||
ಒಂದು ದಿನವೊ ಎರಡು ದಿನವೊ
“ಸ್ವಾಮಿ, ಬುದ್ದೀ ” ಎಂದು ಜನಗಳು
ಗೌರವದಿ ಬಳಿ ಸುಳಿವರು |
ಮೃತ್ಯು ಬಂದೆಳೆವಾಗ ನಿನ್ನನು
ಎಲ್ಲರೂ ಹಿಂದುಳಿವರು ||
ಯಾವ ಪ್ರಿಯತಮೆಯೊಲವಿಗಾಗಿಯೆ
ಹಗಲು ಇರುಳೂ ಜೀವ ತೇದೆಯೊ
ಬಾರಳವಳೂ ಜೊತಯೊಳು |
ನೀನು ಸಾಯಲು ನಿನ್ನ ಶವವನು
ಅಶುಭವೆಂದೇ ತಿಳಿವಳು ||