ಹರಿಯ ನೆನೆಸಿದ ದಿವಸ
Category: ಶ್ರೀಕೃಷ್ಣ
Author: ವಿಜಯದಾಸ
ಹರಿಯ ನೆನೆಸಿದ ದಿವಸ ಶುಭಮಂಗಳ
ಹರಿಯ ನೆನೆಸದ ದಿವಸ ಅವಮಂಗಳ ||
ಹರಿಯ ನೆನೆಸಿದ ನಿಮಿಷ ಆವಾಗಲೂ ಹರುಷ
ಹರಿಯ ನೆನೆಸದ ನಿಮಿಷ ದುರ್ಮಾನಸ|
ಹರಿಯ ನೆನೆಸಿದ ಘಳಿಗೆ ಮುಕ್ತಿಗೆ ಬೆಳವಳಿಗೆ
ಹರಿಯ ನೆನೆಸದ ಘಳಿಗೆ ಯಮನ ಬಳಿಗೆ ||
ಹರಿಯ ನೆನೆಸಿದ ನರನು ಅವನೇನೆ ಕೃತಕೃತ್ಯ
ಹರಿಯ ನೆನೆಸದ ನರನ ಜನುಮ ವ್ಯರ್ಥ |
ಪುರಂದರನ ಪ್ರೀತಿಯ ಶ್ರೀ ವಿಜಯವಿಟ್ಠಲನಂಘ್ರಿ
ಮರೆಯದೆ ಅನುದಿನವು ನೆನೆದವನೆ ಮುಕ್ತ ||