ಬಾರೆ ನಮ್ಮ ಮನಿತನಕ
Category: ಶ್ರೀಮಹಾಲಕ್ಷ್ಮಿ
ಬಾರೆ ನಮ್ಮ ಮನಿತನಕ ಭಾಗ್ಯದ ದೇವಿ
ಬಾರೆ ನಮ್ಮ ಮನಿತನಕ |ಪ|
ಬಾರೆ ನಮ್ಮ ಮನಿತನಕ ಬಹಳ ಕರುಣದಿಂದ ಜೋಡಿಸಿ
ಕರಗಳ ಎರಗುವೆ ಚರಣಕೆ |ಅ ಪ|
ಜರದ ಪೀತಾಂಬರ ನೀರಿಗೆಗಳ್ ಹೊಳೆಯುತ
ಸರಗಿ ಸರವು ಚಂದ್ರ ಹಾರಗಳ್ ಹೊಳೆಯುತ || ೧ ||
ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತ
ತರುಳನ ಮ್ಯಾಲೆ ತಾಯೆ ಕರುಣವಿಟ್ಟು ಬೇಗನೇ || ೨ ||
ಮಂದ ಗಮನೆ ನಿನಗೆ ವಂದಿಸಿ ಬೇಡುವೆ
ಇಂದಿರೇಶನ ಕೂಡ ಇಂದು ನಮ್ಮ ಮನಿತನಕ || ೩ ||