ಹುವ್ವ ತರುವರ ಮನೆಗೆ

Category: ಶ್ರೀಕೃಷ್ಣ

Author: ಪುರಂದರದಾಸ

<p>ಹುವ್ವ ತರುವರ ಮನೆಗೆ ಹುಲ್ಲ ತರುವ
ಅವ್ವ ಲಕುಮೀರಮಣ ಇವಗಿಲ್ಲ ಗರುವ||</p>
<p>ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ
ಇಂದಿರಾರಮಣಗೆ ಅರ್ಪಿತವೆನುತ|
ಒಂದೇ ಮನಸಿನಲಿ ಸಿಂಧುಶಯನ ಎನೆ
ಎಂದೆಂದು ವಾಸಿಪನಾ ಮಂದಿರದೊಳಗೆ||</p>
<p>ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿ|
ಅಂಡಜವಾಹನ ನಮ್ಮ ಪುರಂದರವಿಟ್ಠಲನು
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು||</p>
<p>----ಪುರಂದರದಾಸ</p>